¡Sorpréndeme!

ಕಿಡ್ನಾಪರ್ ಗೆ ಲಾಠಿ ರುಚಿ ತೋರಿಸಿದ ಸಿಪಿಐ | Oneindia Kannada

2018-08-24 450 Dailymotion

The incident happened in Belagavi. Kidnappers got assaulted by Belagavi Police. To know more, watch this video.

ಕಿಡ್ನಾಪರ್ ಗಳಿಗೆ ಪೊಲೀಸ್‌ ಅಧಿಕಾರಿಯೊಬ್ಬರು ಎದ್ವಾತದ್ವಾ ಥಳಿಸಿರುವ ಘಟನೆ ಬೆಳಗಾವಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿಪಿಐ ನಾರಾಯಣ ಸ್ವಾಮಿ, ಆರೋಪಿಗಳಿಗೆ ಲಾಟಿಯಿಂದ ಮನಬಂದಂತೆ ಥಳಿಸುತ್ತಿರುವ ಈ ವಿಡಿಯೋ ವೈರಲ್ ಆಗಿದೆ. ಕೆಲ ದಿನಗಳ ಹಿಂದೆ ಬೆಳಗಾವಿ ತಾಲೂಕಿನ ವಾಘವಾಡೆ ಗ್ರಾಮದಲ್ಲಿ ಯುವಕನೊಬ್ಬನ ಅಪಹರಣವಾಗಿತ್ತು. ಈ ಪ್ರಕರಣದಲ್ಲಿ ನಾಲ್ಕು ಆರೋಪಿಗಳು ಭಾಗಿಯಾಗಿರುವುದಾಗಿ ಮಾಹಿತಿಯೂ ತಿಳಿದುಬಂದಿತ್ತು. ನಾಲ್ವರಲ್ಲಿ ಇಬ್ಬರು ಮನೆಯೊಂದರಲ್ಲಿ ಅಡಗಿ ಕುಳಿತಿದ್ದರು. ಅಲ್ಲಿಗೆ ತೆರಳಿದ ಸಿಪಿಐ ನಾರಾಯಣ ಸ್ವಾಮಿ,ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಕೈಯಲ್ಲಿದ್ದ ಲಾಠಿಯಿಂದ ಮನಬಂದಂತೆ ಥಳಿಸಿದ್ದಾರೆ.